Select Your Language

Notifications

webdunia
webdunia
webdunia
webdunia

ಅಭಿಷೇಕ್ ಅಂಬರೀಶ್ ಗೆ ಕೀರ್ತಿ ಸುರೇಶ್ ನಾಯಕಿ?

ಅಭಿಷೇಕ್ ಅಂಬರೀಶ್ ಗೆ ಕೀರ್ತಿ ಸುರೇಶ್ ನಾಯಕಿ?
ಬೆಂಗಳೂರು , ಮಂಗಳವಾರ, 31 ಮೇ 2022 (16:30 IST)
ಬೆಂಗಳೂರು: ಜೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕರಾಗಿರುವ ನಾಲ್ಕನೇ ಸಿನಿಮಾವೊಂದು ಮೊನ್ನೆಯಷ್ಟೇ ಅಂಬರೀಶ್‍ ಜನ್ಮದಿನ ಪ್ರಯುಕ್ತ ಘೋಷಣೆಯಾಗಿತ್ತು.

ಈ ಸಿನಿಮಾವನ್ನು ಮದಗಜ, ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ನೋಡಿದರೆ ಇದು ಸಖತ್ ರಗಡ್ ಲುಕ್ ಇರುವ ಸಿನಿಮಾ ಎನ್ನುವುದು ಖಾತ್ರಿಯಾಗುತ್ತದೆ.

ಈ ಸಿನಿಮಾಗೆ ಮಹೇಶ್ ಕುಮಾರ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಕ್ಟೋಬರ್ ನಿಂದ ಚಿತ್ರೀಕರಣ ಆರಂಭಿಸಲೂ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು, ಈ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎಂದು ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಮಹೇಶ್ ಕುಮಾರ್, ‘ಕೀರ್ತಿ ಸುರೇಶ್ ರನ್ನು ನಾಯಕಿಯಾಗಿ ಕರೆತರುವ ಯೋಜನೆಯಿದೆ. ಅವರ ಜೊತೆ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ. ಹೀಗಾಗಿ ಈ ಸಿನಿಮಾಗೆ ಸ್ಟಾರ್ ನಟಿಯೊಬ್ಬರು ನಾಯಕಿಯಾಗುವುದು ಖಚಿತ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾನ್ ಇಂಡಿಯಾ ಗದ್ದಲದ ನಡುವೆ ಗೆದ್ದ ವೀಲ್ ಚೇರ್ ರೋಮಿಯೋ, ಕಾಣೆಯಾದವರು ಸಿನಿಮಾಗಳು