Select Your Language

Notifications

webdunia
webdunia
webdunia
webdunia

ಐಪಿಎಲ್ ಹರಾಜಿಗೆ ಮುನ್ನ ಕಿಂಗ್ಸ್ ಪಂಜಾಬ್ ಗೆ ಶಾಕ್ ಕೊಟ್ಟ ವಾಸಿಂ ಜಾಫರ್

ಐಪಿಎಲ್ 2022
ಮುಂಬೈ: ಐಪಿಎಲ್ ಮೆಗಾ ಹರಾಜಿಗೆ ಕೆಲವೇ ದಿನಗಳ ಮೊದಲು ಕಿಂಗ್ಸ್ ಪಂಜಾಬ್ ತಂಡದಿಂದ ಕೋಚ್ ವಾಸಿಂ ಜಾಫರ್ ಹೊರಬಂದಿದ್ದಾರೆ.

ವಾಸಿಂ ಜಾಫರ್ ಪಂಜಾಬ್ ತಂಡದ ಬ್ಯಾಟಿಂಗ್ ಕೋಚ್ ಆಗಿ 2019 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವಕಾಶ ಕೊಟ್ಟ ಪಂಜಾಬ್ ಫ್ರಾಂಚೈಸಿಗೆ ಮತ್ತು ಹೆಡ್ ಕೋಚ್ ಅನಿಲ್ ಕುಂಬ್ಳೆಗೆ ಧನ್ಯವಾದ ಸಲ್ಲಿಸಿದ್ದಾರೆ.

ರಾಜೀನಾಮೆಗೆ ಸ್ಪಷ್ಟ ಕಾರಣ ನೀಡಿಲ್ಲ. ಆದರೆ ಇದಕ್ಕೂ ಮೊದಲು ಸಹಾಯ ಕೋಚ್ ಆಗಿದ್ದ ಆಂಡಿ ಫ್ಲವರ್ ಕೂಡಾ ರಾಜೀನಾಮೆ ನೀಡಿದ್ದರು. ಹೀಗಾಗಿ ಪಂಜಾಬ್ ತಂಡಕ್ಕೆ ಈಗ ತರಬೇತಿ ಸಿಬ್ಬಂದಿಯನ್ನೂ ಆಯ್ಕೆ ಮಾಡುವ ಅನಿವಾರ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ರನ್ನು ಮಧ್ಯಮ ಕ್ರಮಾಂಕಕ್ಕೆ ಫಿಕ್ಸ್ ಮಾಡಲು ನಡೆದಿದೆ ತಯಾರಿ!