Publish Date: Wed, 02 Feb 2022 (09:00 IST)
Updated Date: Wed, 02 Feb 2022 (09:01 IST)
ಮುಂಬೈ: ಐಪಿಎಲ್ 2022 ರ ಮೆಗಾ ಹರಾಜಿಗೆ ಕೆಲವೇ ದಿನಗಳು ಬಾಕಿಯಿದ್ದು, ಯಾವ ಆಟಗಾರ ಯಾವ ತಂಡಕ್ಕೆ ಹರಾಜಾಗಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ದುಬಾರಿ ಬೆಲೆಗೆ ಹರಾಜಾಗಬಲ್ಲ ಆಟಗಾರರ ಪಟ್ಟಿಯಲ್ಲಿ ದೀಪಕ್ ಚಹರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಈ ಮೊದಲು ಶ್ರೀಲಂಕಾ ವಿರುದ್ಧದ ಟೀಂ ಇಂಡಿಯಾ ಸರಣಿಯಲ್ಲಿ, ಹಾಗೂ ಇತ್ತೀಚೆಗೆ ನಡೆದ ದ.ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದೀಪಕ್ ಚಹರ್ ನೀಡಿದ ಪ್ರದರ್ಶನದಿಂದ ಐಪಿಎಲ್ ಫ್ರಾಂಚೈಸಿಗಳು ಅವರನ್ನು ಖರೀದಿ ಮಾಡಲು ಉತ್ಸುಕವಾಗಿದೆ.
ಬೌಲಿಂಗ್ ಮತ್ತು ಒತ್ತಡದ ಸಂದರ್ಭದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಬಲ್ಲ ಆಲ್ ರೌಂಡರ್ ದೀಪಕ್. ಕಿರು ಮಾದರಿಯ ಕ್ರಿಕೆಟಿಗರಿಗೆ ಹೇಳಿ ಮಾಡಿಸಿದ ಆಟಗಾರ ದೀಪಕ್. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ದೀಪಕ್ ದೊಡ್ಡ ಮೊತ್ತಕ್ಕೆ ಸೇಲ್ ಆಗಬಹುದು ಎಂಬ ನಿರೀಕ್ಷೆಯಿದೆ.