Select Your Language

Notifications

webdunia
webdunia
webdunia
webdunia

ಐಪಿಎಲ್ ಹರಾಜು ಲಿಸ್ಟ್ ನಿಂದ ಕ್ರಿಸ್ ಗೇಲ್, ಪ.ಬಂಗಾಲ ಕ್ರೀಡಾ ಸಚಿವರೂ ಸ್ಪರ್ಧೆಯಲ್ಲಿ!

ಐಪಿಎಲ್ ಹರಾಜು ಲಿಸ್ಟ್ ನಿಂದ ಕ್ರಿಸ್ ಗೇಲ್, ಪ.ಬಂಗಾಲ ಕ್ರೀಡಾ ಸಚಿವರೂ ಸ್ಪರ್ಧೆಯಲ್ಲಿ!
ಮುಂಬೈ , ಮಂಗಳವಾರ, 1 ಫೆಬ್ರವರಿ 2022 (17:04 IST)
ಮುಂಬೈ: ಐಪಿಎಲ್ 2022 ಹರಾಜು ಪ್ರಕ್ರಿಯೆಗೆ ಕೆಲವು ದಿನಗಳು ಬಾಕಿಯಿದ್ದು, ಇದಕ್ಕೂ ಮೊದಲು ಬಿಸಿಸಿಐ ಹರಾಜಿಗೊಳಪಡಲಿರುವ ಮತ್ತು ಹೊರಗುಳಿಯಲಿರುವ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.

ಹರಾಜಿಗೊಳಪಡಲಿರುವ ಆಟಗಾರರ ಪಟ್ಟಿಯಲ್ಲಿ ಪ.ಬಂಗಾಲದ ಕ್ರೀಡಾ ಸಚಿವರೂ ಆಗಿರುವ ಕ್ರಿಕೆಟಿಗ ಮನೋಜ್ ತಿವಾರಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, ಶಿಖರ್ ಧವನ್, ಕೃನಾಲ್ ಪಾಂಡ್ಯ, ಡೇವಿಡ್ ವಾರ್ನರ್, ಫಾ ಡು ಪ್ಲೆಸಿಸ್, ಶ್ರೇಯಸ್ ಐಯರ್, ಪ್ಯಾಟ್ ಕ್ಯುಮಿನ್, ಆರ್ ಅಶ್ವಿನ್, ಕ್ವಿಂಟನ್ ಡಿ ಕಾಕ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್, ಮೊಹಮ್ಮದ್ ಶಮಿ ಸೇರಿದಂತೆ ಘಟಾನುಘಟಿ ಆಟಗಾರರು ಹರಾಜಿಗೊಳಪಡಲಿರುವವರ ಪಟ್ಟಿಯಲ್ಲಿದ್ದಾರೆ.

ವಿಶೇಷವೆಂದರೆ ವೆಸ್ಟ್ ಇಂಡೀಸ್ ನ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್, ಇಂಗ್ಲೆಂಡ್ ನ ಖ್ಯಾತ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹರಾಜಿನಿಂದ ಹೊರಗುಳಿದಿರುವ ಪ್ರಮುಖ ಆಟಗಾರರ ಪಟ್ಟಿಯಲ್ಲಿ ಸೇರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಪ್ರವಾಸಕ್ಕೆ ಹೊರಟ ವಿಂಡೀಸ್ ಕ್ರಿಕೆಟಿಗರ ಚಾಲೆಂಜ್