Publish Date: Tue, 01 Feb 2022 (09:59 IST)
Updated Date: Tue, 01 Feb 2022 (10:00 IST)
ಮುಂಬೈ: ಕೊನೆಗೂ ಈ ವರ್ಷ ರಣಜಿ ಕ್ರಿಕೆಟ್ ಆಯೋಜಿಸಲು ಮನಸ್ಸು ಮಾಡಿರುವ ಬಿಸಿಸಿಐ ಫೆಬ್ರವರಿ 16 ರಿಂದ ಮಾರ್ಚ್ 5 ರವರೆಗೆ ನಡೆಸಲು ನಿರ್ಧರಿಸಿದೆ.
ಕೋಲ್ಕೊತ್ತಾ, ಚೆನ್ನೈ, ಅಹಮ್ಮದಾಬಾದ್ ಮತ್ತು ಕಟಕ್ ನಲ್ಲಿ ಎಲೈಟ್ ಗುಂಪಿನ ಪಂದ್ಯಗಳು ನಡೆಯಲಿವೆ. ನಾಲ್ಕು ತಂಡಗಳ ಎಂಟು ಗುಂಪುಗಳು ಈ ಬಾರಿ ಪಂದ್ಯಾವಳಿಯ ಭಾಗವಾಗಲಿದೆ.
ಈ ಮೊದಲು ರಣಜಿ ಕ್ರಿಕೆಟ್ ರದ್ದು ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ದೇಶೀಯ ಕ್ರಿಕೆಟಿಗರಿಂದ ಒತ್ತಡ ಬಂದಿದ್ದರಿಂದ ಬಿಸಿಸಿಐ ಮತ್ತೆ ರಣಜಿ ಆಯೋಜಿಸಲು ತೀರ್ಮಾನಿಸಿತು.