Publish Date: Sun, 30 Jan 2022 (08:40 IST)
Updated Date: Sun, 30 Jan 2022 (09:05 IST)
ಬೆಂಗಳೂರು: ಐಪಿಎಲ್ 2022 ಹರಾಜು ಪ್ರಕ್ರಿಯೆಗೆ ಕೆಲವೇ ದಿನ ಬಾಕಿಯಿದೆ. ಕೆಲವು ತಂಡಗಳು ನಾಯಕನ ಹುಡುಕಾಟ ನಡೆಸುತ್ತಿವೆ. ಆ ಪೈಕಿ ಆರ್ ಸಿಬಿ ಕೂಡಾ ಒಂದು.
ಆದರೆ ಈಗ ಆರ್ ಸಿಬಿಗೆ ವಿರಾಟ್ ಕೊಹ್ಲಿ ಹೊರತಾಗಿ ಹೊಸ ನಾಯಕನ ಸ್ಥಾನಕ್ಕೆ ಇನ್ನೂ ಒಬ್ಬ ಪ್ರಬಲ ಆಟಗಾರನ ಸಿಕ್ಕಿಲ್ಲ. ಕೆಎಲ್ ರಾಹುಲ್ ಈಗಾಗಲೇ ಲಕ್ನೋ ಪಾಲಾಗಿದ್ದಾರೆ. ಶ್ರೇಯಸ್ ಐಯರ್ ಕೂಡಾ ಆರ್ ಸಿಬಿಗೆ ಬರುವುದು ಡೌಟ್.
ಹೀಗೇ ಆದರೆ ಮತ್ತೆ ವಿರಾಟ್ ಕೊಹ್ಲಿಯನ್ನೇ ಈ ಸೀಸನ್ ಮಟ್ಟಿಗೆ ನಾಯಕನಾಗಿ ಮುಂದುವರಿಸಲು ಆರ್ ಸಿಬಿ ಚಿಂತನೆ ನಡೆಸಿದೆ. ಈ ಸೀಸನ್ ನಲ್ಲಿ ಉತ್ತಮ ಆಟಗಾರನನ್ನು ಬೆಳೆಸಿ ಮುಂದಿನ ಸಲಕ್ಕೆ ಹೊಸ ನಾಯಕನನ್ನು ನೇಮಿಸುವ ಬಗ್ಗೆಯೂ ಆರ್ ಸಿಬಿ ಚಿಂತನೆ ನಡೆಸಿದೆ.