ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕಂಚಿನ ಕಂಠದ ಕ್ಯಾಮೆಂಟರಿಗೆ ಹೆಸರು ವಾಸಿ. ಆದರೆ ಅವರಿಗೆ ಈಗ ಕೋಚ್ ಸ್ಥಾನ ಕಳೆದುಕೊಂಡ ಮೇಲೆ ಕಾಮೆಂಟರಿ ಪ್ಯಾನೆಲ್ ನಲ್ಲೂ ಸ್ಥಾನವಿಲ್ಲದಂತಾಗಿದೆ.
									
			
			 
 			
 
 			
			                     
							
							
			        							
								
																	ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ಬಿಸಿಸಿಐ ಕಾಮೆಂಟರಿ ಮಾಡುವವರ ಪಟ್ಟಿ ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ರವಿಶಾಸ್ತ್ರಿ ಸ್ಥಾನ ಪಡೆದಿಲ್ಲ. ಹೀಗಾಗಿ ಅವರಿಗೆ ಐಪಿಎಲ್ 2022 ಮುಕ್ತಾಯವಾಗುವವರೆಗೂ ಕಾಯಬೇಕಾಗಿದೆ.
									
										
								
																	ಈಗ ಬಿಸಿಸಿಐ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್, ಮುರಳಿ ಕಾರ್ತಿಕ್, ಎಲ್. ಶಿವರಾಮಕೃಷ್ಣನ್, ಅಜಿತ್ ಅಗರ್ಕರ್,  ಇಯಾನ್ ಬಿಶಪ್, ಹರ್ಷ ಭೋಗ್ಲೆ, ದೀಪ್ ದಾಸ್ ಗುಪ್ತ ಹೆಸರನ್ನು ಪ್ರಕಟಿಸಿದೆ.