Select Your Language

Notifications

webdunia
webdunia
webdunia
webdunia

ಧೋನಿ ಫೋನ್ ನಂಬರ್ ಕೂಡಾ ನನ್ನಲ್ಲಿಲ್ಲ: ರವಿಶಾಸ್ತ್ರಿ

ಧೋನಿ ಫೋನ್ ನಂಬರ್ ಕೂಡಾ ನನ್ನಲ್ಲಿಲ್ಲ: ರವಿಶಾಸ್ತ್ರಿ
ಮುಂಬೈ , ಗುರುವಾರ, 27 ಜನವರಿ 2022 (09:45 IST)
ಮುಂಬೈ: ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಬಗ್ಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.

ಧೋನಿ ಮೈದಾನದಲ್ಲಿ ಮತ್ತು ಹಿಂದೆ ಎಂತಹಾ ಶಾಂತ ಸ್ವಭಾವದ ವ್ಯಕ್ತಿ ಎಂಬುದನ್ನು ರವಿಶಾಸ್ತ್ರಿ ಹೇಳಿಕೊಂಡಿದ್ದಾರೆ. ಧೋನಿಗೆ ಮೊಬೈಲ್ ಮತ್ತಿತರ ವಸ್ತುಗಳ ಮೇಲೆ ಮೋಹವೇ ಇರಲಿಲ್ಲವಂತೆ. ಎಷ್ಟೆಂದರೆ ಮೊಬೈಲ್ ಇಲ್ಲದೇ ದಿನಗಟ್ಟಲೆ ಇರು ಎಂದರೂ ಯಾವುದೇ ಬೇಸರವಿಲ್ಲದೇ ಕಳೆಯುತ್ತಾರೆ. ಅವರಂತಹ ಶಾಂತ ಸ್ವಭಾವದ ವ್ಯಕ್ತಿಯನ್ನು ನಾನು ನೋಡಿಯೇ ಇರಲಿಲ್ಲ. ಅಷ್ಟು ಕೂಲ್ ಧೋನಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

‘ವಿಶ್ವಕಪ್ ಗೆಲ್ಲಲಿ, ಮೊದಲ ಸುತ್ತಿನಲ್ಲಿ ಸೋಲಲಿ, ಸೆಂಚುರಿ ಹೊಡೆಯಲಿ, ಶೂನ್ಯಕ್ಕೆ ಔಟಾಗಲಿ ಅವರ ಭಾವ ಒಂದೇ ರೀತಿ ಆಗಿರುತ್ತಿತ್ತು. ಇಂದಿಗೂ ನನ್ನಲ್ಲಿ ಅವರ ಫೋನ್ ನಂಬರ್ ಕೂಡಾ ಇಲ್ಲ.  ಅವರು ಯಾವತ್ತೂ ತಮ್ಮ ಜೊತೆಗೆ ಫೋನ್ ಇಟ್ಟುಕೊಂಡವರೇ ಅಲ್ಲ. ಅವರನ್ನು ಸಂಪರ್ಕಿಸಬೇಕೆಂದು ನಿಮಗನಿಸಿದರೆ ನಿಮ್ಮ ಕೈಗೆ ಸಿಗುತ್ತಿದ್ದರು. ಅಂತಹಾ ಅಚ್ಚರಿಯ ಮನುಷ್ಯ. ಸಚಿನ್ ತೆಂಡುಲ್ಕರ್ ಕೂಡಾ ಶಾಂತ ಸ್ವಭಾವದವರು. ಆದರೆ ಅವರಿಗಾದರೂ ಕೆಲವೊಮ್ಮೆ ಸಿಟ್ಟು ಬರುತ್ತಿದ್ದುದು ಇದೆ. ಆದರೆ ಧೋನಿ ಹಾಗಲ್ಲ. ವಿರಾಟ್ ಮೈದಾನದಲ್ಲಷ್ಟೇ ಆಕ್ರಮಣಕಾರಿ ಸ್ವಭಾವದ ವ್ಯಕ್ತಿ. ಮೈದಾನದ ಹೊರಗೆ ಅಷ್ಟೇ ಶಾಂತ ಸ್ವಭಾವದವರು’ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ಸರಣಿಗೆ ರವಿಚಂದ್ರನ್ ಅಶ್ವಿನ್ ಗೈರು, ರೋಹಿತ್ ಕಮ್ ಬ್ಯಾಕ್