ಮುಂಬೈ: ಗಾಯಗೊಂಡು ಚೇತರಿಸಿಕೊಂಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆ ಪಾಸಾಗಿದ್ದು, ಟೀಂ ಇಂಡಿಯಾಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.
ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿಯಲ್ಲಿ ಫಿಟ್ನೆಸ್ ಪರೀಕ್ಷೆಗೊಳಗಾದ ರೋಹಿತ್ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಹೀಗಾಗಿ ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಕಮ್ ಬ್ಯಾಕ್ ಮಾಡುವುದು ಖಚಿತವಾಗಿದೆ.
ರೋಹಿತ್ ರನ್ನು ಸೀಮಿತ ಓವರ್ ಗಳ ನಾಯಕನಾಗಿ ಘೋಷಿಸಿದ ಮೇಲೆ ಅವರಿಗೆ ಇದು ಮೊದಲ ಸರಣಿಯಾಗಿದೆ. ಕಳೆದ ಬಾರಿ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಗಾಯಗೊಂಡಿದ್ದರಿಂದ ಅವರಿಗೆ ಪಾಲ್ಗೊಳ್ಳಲಾಗಿರಲಿಲ್ಲ. ಈಗ ಸೋತು ಸುಣ್ಣವಾಗಿರುವ ಟೀಂ ಇಂಡಿಯಾಗೆ ರೋಹಿತ್ ಕಮ್ ಬ್ಯಾಕ್ ಹೊಸ ಚೈತನ್ಯ ನೀಡಲಿದೆ.