ಮುಂಬೈ: ಟೀಂ ಇಂಡಿಯಾವನ್ನು ಮೊದಲ ಬಾರಿಗೆ ನಾಯಕನಾಗಿ ಮುನ್ನಡೆಸುವ ಅವಕಾಶ ಸಿಕ್ಕಿಯೂ ಗೆಲುವು ಮರೀಚಿಕೆಯಾದ ಬಳಿಕ ಕೆಎಲ್ ರಾಹುಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಏಕದಿನ ಸರಣಿ ಸೋಲಿನ ಬಳಿಕ ಮಾತನಾಡಿರುವ ಕೆಎಲ್ ರಾಹುಲ್, ಸೀಮಿತ ಓವರ್ ಗಳ ಆಟದಲ್ಲಿ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗಳಾಗಬೇಕಾದ ಅಗತ್ಯವಿದೆ ಎಂದಿದ್ದಾರೆ.
ಕೆಲವರು ಈ ಸೋಲಿನ ಬಳಿಕ ರಾಹುಲ್ ನಾಯಕತ್ವದ ಅವಕಾಶವನ್ನು ತಾವೇ ಕೈಯಾರೆ ಹಾಳು ಮಾಡಿಕೊಂಡರು. ಅವರಿಗೆ ನಾಯಕತ್ವದ ಸಾಮರ್ಥ್ಯವಿಲ್ಲ ಎಂದು ಟೀಕಿಸಿದ್ದರು. ಇದಕ್ಕೆ ಉತ್ತರಿಸಿರುವ ರಾಹುಲ್ ನನಗೆ ವೃತ್ತಿಜೀವನದಲ್ಲಿ ಎಲ್ಲವೂ ನಿಧಾನವಾಗಿಯೇ ಸಿಕ್ಕಿದೆ. ನಾನು ನಿಧಾನವಾಗಿ ಆರಂಭಿಸಿ ಬಳಿಕ ಯಶಸ್ಸು ಕಂಡವನು. ಇಲ್ಲಿಯೂ ಹೀಗೆ. ನನ್ನ ನಾಯಕತ್ವದ ಸಾಮರ್ಥ್ಯದ ಮೇಲೆ ನನಗೆ ನಂಬಿಕೆಯಿದೆ. ಸೋತಿದ್ದರಿಂದ ಹಲವು ವಿಚಾರಗಳನ್ನು ಕಲಿತೆ. ಗೆದ್ದಿದ್ದರೆ ಬಹುಶಃ ನನಗೆ ಕಲಿಯಲು ಅವಕಾಶಗಳಿರುತ್ತಿರಲಿಲ್ಲ. ನಾಯಕತ್ವ ವಹಿಸಿದ್ದು ಹೆಮ್ಮೆಯ ಕ್ಷಣ ಎಂದಿದ್ದಾರೆ.