Publish Date: Tue, 25 Jan 2022 (08:40 IST)
Updated Date: Tue, 25 Jan 2022 (08:42 IST)
ಪಾರ್ಲ್: ದ.ಆಫ್ರಿಕಾ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಸೋತ ಟೀಂ ಇಂಡಿಯಾಗೆ ಸರಣಿ ಸೋಲಿನ ಜೊತೆಗೆ ಐಸಿಸಿಯಿಂದ ದಂಡದ ಬರೆ ಸಿಕ್ಕಿದೆ.
ಮೂರನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಪಡೆ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಪಂದ್ಯದ ಶುಲ್ಕದ ಶೇ.40 ರಷ್ಟು ದಂಡದ ರೂಪದಲ್ಲಿ ತೆರಬೇಕಾಗಿದೆ.
ನಿಗದಿತ ಸಮಯಕ್ಕಿಂತ ಎರಡು ಓವರ್ ಗಳಷ್ಟು ಹಿಂದಿದ್ದ ಕಾರಣಕ್ಕೆ ಟೀಂ ಇಂಡಿಯಾಗೆ ದಂಡ ವಿಧಿಸಲಾಗಿದೆ. ನಾಯಕನಿಗೆ ಶೇ.40 ರಷ್ಟು ದಂಡ ಮತ್ತು ಇತರ ಆಟಗಾರರಿಗೆ ಶೇ.20 ರಷ್ಟು ದಂಡ ವಿಧಿಸಲಾಗಿದೆ.