Publish Date: Mon, 24 Jan 2022 (09:20 IST)
Updated Date: Mon, 24 Jan 2022 (09:22 IST)
ಮುಂಬೈ: ಟೀಂ ಇಂಡಿಯಾ ರನ್ ಮೆಷಿನ್ ಎಂದೇ ಖ್ಯಾತರಾಗಿದ್ದ ವಿರಾಟ್ ಕೊಹ್ಲಿ ಯಾಕೋ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಶತಕ ದಾಖಲಿಸಿಲ್ಲ. ಇದಕ್ಕೆ ತಜ್ಞರು ಏನೆಲ್ಲಾ ಕಾರಣ ನೀಡಬಹುದು. ಆದರೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಮಾತ್ರ ಇದಕ್ಕೆ ವಿರಾಟ್ ಪತ್ನಿ ಅನುಷ್ಕಾ ಮೇಲೆ ಗೂಬೆ ಕೂರಿಸಿದ್ದಾರೆ.
ಮದುವೆಯಾದರೆ ಜವಾಬ್ಧಾರಿ ಜಾಸ್ತಿಯಾಗುತ್ತೆ. ಆಗ ಆಟದ ಬಗ್ಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೊಹ್ಲಿ ಈಗಲೇ ಮದುವೆಯಾಗಬಾರದಿತ್ತು ಎಂದಿದ್ದಾರೆ ಶೊಯೇಬ್.
ಕೊಹ್ಲಿ ಸ್ಥಾನದಲ್ಲಿ ನಾನು ಇದ್ದಿದ್ದರೆ ಮದುವೆಯೇ ಆಗುತ್ತಿರಲಿಲ್ಲ. ಸದ್ಯಕ್ಕೆ ನನ್ನ ಆಟವನ್ನು ಎಂಜಾಯ್ ಮಾಡುತ್ತಿದ್ದೆ. ಮದುವೆಯಾಗುವುದೇ ತಪ್ಪು ಎಂದು ನಾನು ಹೇಳಲ್ಲ. ಆದರೆ ಆಡುವಾಗ ಅದರಲ್ಲೂ ಕ್ರಿಕೆಟ್ ಪ್ರಿಯ ಭಾರತದಲ್ಲಿ ಕೊಹ್ಲಿ ಎಂದರೆ ವಿಶೇಷ ಕ್ರೇಜ್ ಇದೆ. ಹೀಗಾಗಿ ಆಡುವಷ್ಟು ಸಮಯ ಕ್ರಿಕೆಟ್ ಗೆ ಗಮನ ಕೊಡಬೇಕು ಎಂದು ಶೊಯೇಬ್ ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ವೈರಲ್ ಆಗಿದೆ.