ಮುಂಬೈ: ಈ ವರ್ಷ ಐಪಿಎಲ್ ಗೆ ಹೊಸದಾಗಿ ಸೇರ್ಪಡೆಯಾಗಿರುವ ಲಕ್ನೋ ಫ್ರಾಂಚೈಸಿಗೆ ಹೊಸ ಹೆಸರು ನೀಡಲಾಗಿದೆ.
ಕೆಎಲ್ ರಾಹುಲ್ ನಾಯಕರಾಗಿರುವ ಲಕ್ನೋ ಫ್ರಾಂಚೈಸಿಗೆ ಲಕ್ನೋ ಸೂಪರ್ ಜೈಂಟ್ಸ್ ಎಂದು ಹೆಸರಿಡಲಾಗಿದೆ. ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಈ ಹೊಸ ಹೆಸರನ್ನು ಅನಾವರಣಗೊಳಿಸಿದ್ದಾರೆ.
ರಾಹುಲ್ ಜೊತೆಗೆ ಲಕ್ನೋ ಈಗಾಗಲೇ ಆಸ್ಟ್ರೇಲಿಯಾದ ಆಲ್ ರೌಂಡರ್ ಮಾರ್ಕ್ ಸ್ಟಾಯ್ನಿಸ್, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಲಿದೆ.