ಮುಂಬೈ: ಐಪಿಎಲ್ 2022 ಈ ಬಾರಿ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಇನ್ನು, ಫೆಬ್ರವರಿ 12 ಮತ್ತು 13 ಕ್ಕೆ ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಕೊರೋನಾ ಕಾರಣದಿಂದ ಐಪಿಎಲ್ ಬೇರೆ ದೇಶಕ್ಕೆ ಶಿಫ್ಟ್ ಆಗಬಹುದು ಎಂಬ ಅನುಮಾನಗಳಿಗೆ ಜಯ್ ಶಾ ತೆರೆ ಎಳೆದಿದ್ದಾರೆ.
ಮಾರ್ಚ್ ಅಂತ್ಯಕ್ಕೆ ಶುರುವಾಗಿ ಮೇ ಅಂತ್ಯದವರೆಗೂ ಐಪಿಎಲ್ ನಡೆಯಲಿದೆ. ಆದಷ್ಟು ಭಾರತದಲ್ಲೇ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಟೂರ್ನಿ ಆಯೋಜಿಸಲು ಬಿಸಿಸಿಐ ಪ್ರಯತ್ನಿಸಲಿದೆ ಎಂದು ಜಯ್ ಶಾ ಹೇಳಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!