Publish Date: Mon, 31 Jan 2022 (09:19 IST)
Updated Date: Mon, 31 Jan 2022 (09:21 IST)
ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಾರಕ್ಕೂ ಮೊದಲೇ ಟೀಂ ಇಂಡಿಯಾದ ಕೆಲವು ಆಟಗಾರರು ಅಹಮ್ಮದಾಬಾದ್ ಗೆ ಬಂದಿಳಿದಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ವಿಶೇಷ ವಿಮಾನವನ್ನೇ ವ್ಯವಸ್ಥೆ ಮಾಡಿಲ್ಲ ಎನ್ನುವುದು ಭಾರೀ ಸುದ್ದಿಯಾಗಿತ್ತು. ಇದೀಗ ಕೆಲವು ಕ್ರಿಕೆಟಿಗರು ಏಕದಿನ ಸರಣಿ ನಡೆಯಲಿರುವ ಅಹಮ್ಮದಾಬಾದ್ ಗೆ ಬಂದಿಳಿದಿದ್ದಾರೆ.
ಶಿಖರ್ ಧವನ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್ ಇತ್ಯಾದಿ ಕ್ರಿಕೆಟಿಗರು ಅಹಮ್ಮದಾಬಾದ್ ಗೆ ಬಂದಿದ್ದಾರೆ. ಉಳಿದ ಕ್ರಿಕೆಟಿಗರೂ ಇವರನ್ನು ಕೂಡಿಕೊಳ್ಳಲಿದ್ದಾರೆ.