Publish Date: Wed, 09 Feb 2022 (11:33 IST)
Updated Date: Wed, 09 Feb 2022 (11:34 IST)
ಮುಂಬೈ: ಐಪಿಎಲ್ 2022 ಕ್ಕೆ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಯಾವ ಆಟಗಾರ ಯಾವ ತಂಡಕ್ಕೆ ಬಿಕರಿಯಾಗಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲೂ ಕುತೂಹಲವಿದೆ. ಹೀಗಾಗಿ ಐಪಿಎಲ್ ಹರಾಜು ಪ್ರಕ್ರಿಯೆಯ ನೇರಪ್ರಸಾರ ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.
ಫೆಬ್ರವರಿ 12 ರಿಂದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಹರಾಜು ಪ್ರಕ್ರಿಯೆಯ ನೇರಪ್ರಸಾರ ವೀಕ್ಷಿಸಬಹುದು. ಇದಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕ ಹರಾಜಾದ ಆಟಗಾರರ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.