ಅಹಮ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾದ ಪ್ರಮುಖ ಆಟಗಾರರು ತಂಡಕ್ಕೆ ವಾಪಸ್ ಆಗಿದ್ದಾರೆ.
									
			
			 
 			
 
 			
					
			        							
								
																	ಕೆಎಲ್ ರಾಹುಲ್ ಎರಡನೇ ಏಕದಿನ ಪಂದ್ಯಕ್ಕೆ ತಂಡಕ್ಕೆ ಕೂಡಿಕೊಳ್ಳಬೇಕಾಗಿತ್ತು. ಅದರಂತೆ ಈಗ ತಂಡಕ್ಕೆ ಮರಳಿದ್ದು, ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ದ್ವಿತೀಯ ಏಕದಿನ ಪಂದ್ಯದಲ್ಲಿ ಆಡುವುದು ಪಕ್ಕಾ ಆಗಿದೆ.
									
										
								
																	ಇನ್ನು, ಟೀಂ ಇಂಡಿಯಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಮಯಾಂಕ್ ಅಗರ್ವಾಲ್ ಗೆ ಕರೆ ನೀಡಲಾಗಿತ್ತು. ಅದರಂತೆ ಮಯಾಂಕ್ ಅಹಮ್ಮದಾಬಾದ್ ಗೆ ಬಂದಿಳಿದಿದ್ದರು. ಆದರೆ ನಿಯಮಗಳ ಪ್ರಕಾರ ಕಡ್ಡಾಯ ಕ್ವಾರಂಟೈನ್ ಗೊಳಗಾಗಬೇಕಾಗಿದ್ದರಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಈಗ ಎರಡನೇ ಪಂದ್ಯದ ವೇಳೆಗೆ ಕ್ವಾರಂಟೈನ್ ಮುಗಿಸಿ ವಾಪಸ್ ಆಗಿದ್ದಾರೆ.
									
											
							                     
							
							
			        							
								
																	ಕೊರೋನಾ ಸೋಂಕಿಗೊಳಗಾಗಿದ್ದ ನವದೀಪ್ ಸೈನಿ ಈಗ ಚೇತರಿಸಿಕೊಂಡಿದ್ದು, ಎರಡನೇ ಪಂದ್ಯಕ್ಕೆ ಲಭ್ಯರಿದ್ದಾರೆ. ಸೋಂಕಿತರಾಗಿದ್ದ ಇತರ ಕ್ರಿಕೆಟಿಗರು ಈಗ ಚೇತರಿಸಿಕೊಳ್ಳುತ್ತಿದ್ದು, ಅಂತಿಮ ಪಂದ್ಯದ ವೇಳೆಗೆ ಲಭ್ಯರಾಗಬಹುದು.