Publish Date: Sun, 06 Feb 2022 (09:00 IST)
Updated Date: Sun, 06 Feb 2022 (09:04 IST)
ಆಂಟಿಗ್ವಾ: ಇಂಗ್ಲೆಂಡ್ ವಿರುದ್ಧ ನಡೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದ ಭಾರತ ಮತ್ತೊಮ್ಮೆ ಕಿರಿಯರ ವಿಶ್ವಕಪ್ ಚಾಂಪಿಯನ್ ಆಗಿದೆ. ಭಾರತೀಯರ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಮೂಲಕ ಐದನೇ ಬಾರಿಗೆ ಭಾರತ ಅಂಡರ್ 19 ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಇಂಗ್ಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ರೋಚಕವಾಗಿ ಸೋಲಿಸಿದ ಭಾರತ ಮತ್ತೊಮ್ಮೆ ಕಪ್ ತಮ್ಮದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 44.5 ಓವರ್ ಗಳಲ್ಲಿ 189 ರನ್ ಗಳಿಗೆ ಆಲೌಟ್ ಆಯಿತು. ಜೇಮ್ಸ್ ರೂ 95 ರನ್ ಗಳಿಸಿ ಮಿಂಚಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಭಾರತ ಆರಂಭದಲ್ಲೇ ರಘುವಂಶಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಶೇಕ್ ರಶೀದ್ 50, ನಿಶಾಂತ್ ಸಿಂಧು ಅಜೇಯ 50 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತ ಅಂತಿಮವಾಗಿ 47.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಗೆದ್ದ ಭಾರತೀಯ ಕ್ರಿಕೆಟಿಗರಿಗೆ 40 ಲಕ್ಷ ರೂ. ಬಹುಮಾನ ಸಂದಾಯವಾಗಲಿದೆ.