Publish Date: Sat, 05 Feb 2022 (09:50 IST)
Updated Date: Sat, 05 Feb 2022 (10:03 IST)
ಮುಂಬೈ: ಪುರುಷರ ಕ್ರಿಕೆಟ್ ನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶದ ಜೊತೆಗೆ ಜೇಬು ತುಂಬಿಸುತ್ತಿರುವ ಐಪಿಎಲ್ ಕ್ರೀಡಾ ಕೂಟ ಮುಂದಿನ ವರ್ಷದಿಂದ ಮಹಿಳೆಯರಿಗೂ ಪೂರ್ಣ ಪ್ರಮಾಣದಲ್ಲಿ ನಡೆಯಲಿದೆ.
ಮುಂದಿನ ವರ್ಷದಿಂದ ಮಹಿಳೆಯರಿಗೂ ಪೂರ್ಣ ಪ್ರಮಾಣದಲ್ಲಿ ಐಪಿಎಲ್ ಆರಂಭವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿದ್ದಾರೆ.
ಮುಂದಿನ ವರ್ಷದಿಂದ ಮಹಿಳೆಯರಿಗೂ ದೊಡ್ಡ ಮಟ್ಟದಲ್ಲಿ ಐಪಿಎಲ್ ಆಯೋಜಿಸುವುದು ನಮ್ಮ ಗುರಿ. ಇದಕ್ಕಾಗಿ ತಯಾರಿ ನಡೆಯುತ್ತಿದೆ. ನನ್ನ ಪ್ರಕಾರ 2023 ರಿಂದ ಮಹಿಳೆಯರಿಗೂ ಪೂರ್ಣ ಪ್ರಮಾಣದಲ್ಲಿ ಐಪಿಎಲ್ ನಡೆಸಲಾಗುವುದು. ಇದು ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದು ಗಂಗೂಲಿ ಹೇಳಿದ್ದಾರೆ.