Publish Date: Sat, 05 Feb 2022 (09:10 IST)
Updated Date: Sat, 05 Feb 2022 (09:39 IST)
ಆಂಟಿಗ್ವಾ: ಅಂಡರ್ 19 ವಿಶ್ವಕಪ್ ಕೂಟದಲ್ಲಿ ಮತ್ತೊಮ್ಮೆ ಫೈನಲ್ ಗೆದ್ದು ಚಾಂಪಿಯನ್ ಎನಿಸಿಕೊಳ್ಳುವ ಉತ್ಸಾಹದಲ್ಲಿ ಇಂದು ಭಾರತ ತಂಡ ಇಂಗ್ಲೆಂಡ್ ನ್ನು ಎದುರಿಸಲಿದೆ.
ವೆಸ್ಟ್ ಇಂಡೀಸ್ ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಯಶ್ ಧುಲ್ ನೇತೃತ್ವದ ಭಾರತ ತಂಡ ಇದುವರೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.
ಅತ್ತ ಇಂಗ್ಲೆಂಡ್ ಗೆ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಗೆಲ್ಲುವ ಕನಸು. ಆದರೆ ಭಾರತ ಇದುವರೆಗೆ ಆರು ಬಾರಿ ಅಂಡರ್ 19 ವಿಶ್ವಕಪ್ ಗೆದ್ದುಕೊಂಡಿದೆ. ಕೊನೆಯ ಬಾರಿಗೆ 2020 ರಲ್ಲಿ ಪ್ರಿಯಂ ಗಾರ್ಗ್ ನೇತೃತ್ವದಲ್ಲಿ ಕಪ್ ತನ್ನದಾಗಿಸಿಕೊಂಡಿತ್ತು. ಇಂದಿನ ಪಂದ್ಯದಲ್ಲಿ ಗೆದ್ದು ಮತ್ತೆ ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿ ಭಾರತೀಯ ಹುಡುಗರಿದ್ದಾರೆ.