ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಮೊದಲು ಟೀಂ ಇಂಡಿಯಾದ ಪ್ರಮುಖ ಆಟಗಾರರಿಗೆ ಕೊರೋನಾ ಸೋಂಕು ತಗುಲಿದ್ದು, ಆರಂಭಿಕ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಆದರೆ ಬಿಸಿಸಿಐಯ ಈ ನಿರ್ಧಾರ ನೆಟ್ಟಿಗರ ಆಕ್ಷೇಪಕ್ಕೆ ಗುರಿಯಾಗಿದೆ. ಮಯಾಂಕ್ ಅಗರ್ವಾಲ್ ಟೆಸ್ಟ್ ಸ್ಪೆಷಲಿಸ್ಟ್. ಏಕದಿನ ಫಾರ್ಮ್ಯಾಟ್ ನಲ್ಲಿ ಅವರು ಆಡುವುದೇ ಅಪರೂಪ.
ಹೀಗಿರುವಾಗ ಪೃಥ‍್ವಿ ಶಾ, ಸಂಜು ಸ್ಯಾಮ್ಸನ್ ರಂತಹ ಸೀಮಿತ ಓವರ್ ಗಳಿಗೆ ಹೇಳಿ ಮಾಡಿಸಿದ ಆಟಗಾರರಿಗೆ ಅವಕಾಶ ನೀಡುವ ಬದಲು ಮಯಾಂಕ್ ಗೆ ಅವಕಾಶ ನೀಡಿದ್ದೇಕೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಿಸಿದ್ದಾರೆ.