Publish Date: Sat, 05 Feb 2022 (16:55 IST)
Updated Date: Sat, 05 Feb 2022 (16:57 IST)
ಅಹಮ್ಮದಾಬಾದ್: ಭಾರತ ಮತ್ತು ವಸ್ಟ್ ಇಂಡೀಸ್ ನಡುವೆ ನಾಳ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆರಂಭಿಕರು ಯಾರು ಎಂಬುದನ್ನು ನಾಯಕ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.
ಭಾರತ ತಂಡದಲ್ಲಿ ಕೊರೋನಾ ಸೋಂಕಿನಿಂದ ಹಲವು ಆಟಗಾರರು ಮೊದಲ ಪಂದ್ಯಕ್ಕೆ ಗೈರಾಗಲಿದ್ದಾರೆ. ಅವರಲ್ಲಿ ಆರಂಭಿಕ ಶಿಖರ್ ಧವನ್ ಕೂಡಾ ಒಬ್ಬರು. ಕೆಎಲ್ ರಾಹುಲ್ ದ್ವಿತೀಯ ಏಕದಿನ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಹೀಗಾಗಿ ಮೊದಲ ಪಂದ್ಯಕ್ಕೆ ರೋಹಿತ್ ಜೊತೆಗೆ ಓಪನರ್ ಆಗಿ ಭಾರತದ ಪರ ಇಶಾನ್ ಕಿಶನ್ ಕಣಕ್ಕಿಳಿಯಲಿದ್ದಾರೆ. ಈ ವಿಚಾರವನ್ನು ಖುದ್ದು ರೋಹಿತ್ ಖಚಿತಪಡಿಸಿದ್ದಾರೆ.