ಮುಂಬೈ: ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದ ಚಿಂತೆ ನಿವಾರಿಸಲು ಮ್ಯಾನೇಜ್ ಮೆಂಟ್ ಹೊಸ ಪ್ಲ್ಯಾನ್ ಮಾಡಿಕೊಂಡಿದೆ.
ಅದರ ಭಾಗವಾಗಿ ವಿಂಡೀಸ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು ಇದೇ ಯೋಜನೆಯ ಭಾಗ. ಶಿಖರ್ ಧವನ್ ಅನುಪಸ್ಥಿತಿಯಲ್ಲೂ ತಂಡಕ್ಕೆ ಮತ್ತೊಬ್ಬ ಆರಂಭಿಕನನ್ನು ಪಕ್ಕಾ ಮಾಡಿಕೊಂಡರೆ ಮಧ್ಯಮ ಕ್ರಮಾಂಕಕ್ಕೆ ಬಲದ ತುಂಬಲು ಕೆಎಲ್ ರಾಹುಲ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು ಎಂಬುದು ಮ್ಯಾನೇಜ್ ಮೆಂಟ್ ಲೆಕ್ಕಾಚಾರ.
ಆದರೆ ಪಂತ್ ಆರಂಭಿಕರಾಗಿ ಯಶಸ್ವಿಯಾಗಲಿಲ್ಲ. ಆದರೆ ಅವರ ಬದಲು ಇನ್ನೊಬ್ಬರನ್ನು ಪ್ರಯೋಗ ಮಾಡಿ ವಿಶ್ವಕಪ್ ಗೆ ಮೊದಲು ಬದಲಿ ಆರಂಭಿಕರನ್ನು ಹುಡುಕುವುದು ಟೀಂ ಇಂಡಿಯಾ ಯೋಜನೆಯಾಗಿರಲಿದೆ.