Select Your Language

Notifications

webdunia
webdunia
webdunia
webdunia

ಫಾರ್ಮ್ ಕಂಡುಕೊಳ್ಳಲು ರಣಜಿ ಮೊರೆ ಹೋದ ರೆಹಾನೆ, ಪೂಜಾರ

ಫಾರ್ಮ್ ಕಂಡುಕೊಳ್ಳಲು ರಣಜಿ ಮೊರೆ ಹೋದ ರೆಹಾನೆ, ಪೂಜಾರ
ಮುಂಬೈ , ಗುರುವಾರ, 10 ಫೆಬ್ರವರಿ 2022 (09:10 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಗಳಾದ ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಫಾರ್ಮ್ ಸಮಸ್ಯೆಗೊಳಗಾಗಿದ್ದಾರೆ. ಹೀಗಾಗಿ ಅವರೀಗ ರಣಜಿ ಟ್ರೋಫಿ ಕ್ರಿಕೆಟ್ ನ ಮೊರೆ ಹೋಗಿದ್ದಾರೆ.

ಇಬ್ಬರೂ ಕ್ರಿಕೆಟಿಗರು ಕಳೆದ ಸಾಕಷ್ಟು ಸಮಯದಿಂದ ರನ್ ಗಳಿಸಿಲ್ಲ. ಹೀಗಾಗಿ ಸಾಕಷ್ಟು ಟೀಕೆಗೊಳಗಾಗಿದ್ದಾರೆ. ಅವರೀಗ ತಂಡದಿಂದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಇಂತಹ ಸಮಯದಲ್ಲಿ ರಣಜಿ ಇಬ್ಬರೂ ಕ್ರಿಕೆಟಿಗರಿಗೆ ಉತ್ತಮ ಅವಕಾಶವಾಗಿದ್ದು, ರೆಹಾನೆ ಮುಂಬೈ ಪರ ಪೃಥ್ವಿ ಶಾ ನೇತೃತ್ವದ ತಂಡದ ಪರ ರಣಜಿ ಆಡಲು ಹೊರಟಿದ್ದಾರೆ. ಇನ್ನು, ಪೂಜಾರ ಸೌರಾಷ್ಟ್ರ ಪರ ರಣಜಿ ಆಡಲು ಮುಂದಾಗಿದ್ದಾರೆ. ಫೆಬ್ರವರಿ 17 ರಿಂದ ರಣಜಿ ಟ್ರೋಫಿ ಕ್ರಿಕೆಟ್ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಆಪತ್ಬಾಂಧವರಾದ ಬೌಲರ್ ಗಳು