Publish Date: Thu, 10 Feb 2022 (08:40 IST)
Updated Date: Thu, 10 Feb 2022 (09:18 IST)
ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಬೌಲರ್ ಗಳ ಪರಾಕ್ರಮದಿಂದ 44 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿ ಕೈ ವಶ ಮಾಡಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಬ್ಯಾಟಿಗರ ಪರದಾಟದ ನಡುವೆಯೂ ಹಾಗೂ ಹೀಗೂ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತು.
ಈ ಸಾಧಾರಣ ಮೊತ್ತ ಬೆನ್ನತ್ತಿದ ವಿಂಡೀಸ್ ಆರಂಭ ಉತ್ತಮವಾಗಿತ್ತು. ಆದರೆ ಇದು ಹೆಚ್ಚು ಉಳಿಯಲಿಲ್ಲ. ಕನ್ನಡಿಗ ವೇಗಿ ಪ್ರಸಿದ್ಧ ಕೃಷ್ಣ ಭಾರತಕ್ಕೆ ಬ್ರೇಕ್ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬ್ರೂಕ್ಸ್ 44, ಅಕೀಲ್ ಹುಸೈನ್ 34 ರನ್ ಗಳಿಸಿ ಮಿಂಚಿದರು. ಆದರೆ ಭಾರತದ ಬೌಲರಗಳು ನಿಯಮಿತವಾಗಿ ವಿಕೆಟ್ ಬೇಟೆಯಾಡಿದ್ದರಿಂದ ವಿಂಡೀಸ್ ಗೆ ಗೆಲ್ಲಲು ಸಾಧ‍್ಯವಾಗಲಿಲ್ಲ. ಅಂತಿಮವಾಗಿ ವಿಂಡೀಸ್ 46 ಓವರ್ ಗಳಲ್ಲಿ 196 ರನ್ ಗಳಿಗೆ ಆಲೌಟ್ ಆಯಿತು. ಪ್ರಸಿದ್ಧ ಕೃಷ್ಣ 4, ಶ್ರಾದ್ಧೂಲ್ ಠಾಕೂರ್ 2, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ದೀಪಕ್ ಹೂಡಾ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.