ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ತಂಡದ ನಡುವೆ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯ ವೀಕ್ಷಿಸಲು ಅಂಡರ್ 19 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡ ಆಗಮಿಸಿದೆ.
ಅಹಮ್ಮದಾಬಾದ್ ನ ಮೈದಾನದ ವಿಐಪಿ ಗ್ಯಾಲರಿಯಲ್ಲಿ ಅಂಡರ್ 19 ತಂಡ ಟೀಂ ಇಂಡಿಯಾ ಬ್ಯಾಟಿಂಗ್ ವೀಕ್ಷಿಸಿದೆ. ಈ ಕ್ಷಣಗಳನ್ನು ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಇಂಗ್ಲೆಂಡ್ ನ್ನು ಮಣಿಸಿ ಭಾರತದ ಯಶ್ ಧುಲ್ ನೇತೃತ್ವದ ತಂಡ ಐದನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು. ನಿನ್ನೆಯಷ್ಟೇ ಭಾರತ ತಂಡ ತವರಿಗೆ ಆಗಮಿಸಿತ್ತು. ವಿಶ್ವ ವಿಜೇತ ತಂಡಕ್ಕೆ ಬಿಸಿಸಿಐ ಸನ್ಮಾನಿಸುವ ಯೋಜನೆ ಹಾಕಿಕೊಂಡಿದೆ.