Select Your Language

Notifications

webdunia
webdunia
webdunia
webdunia

ನನ್ನ ಕೆಲಸದ ಕ್ರೆಡಿಟ್ ಇನ್ಯಾರೋ ಪಡೆದುಕೊಂಡರು: ಅಜಿಂಕ್ಯಾ ರೆಹಾನೆ ಬೇಸರ

ನನ್ನ ಕೆಲಸದ ಕ್ರೆಡಿಟ್ ಇನ್ಯಾರೋ ಪಡೆದುಕೊಂಡರು: ಅಜಿಂಕ್ಯಾ ರೆಹಾನೆ ಬೇಸರ
ಮುಂಬೈ , ಗುರುವಾರ, 10 ಫೆಬ್ರವರಿ 2022 (16:49 IST)
ಮುಂಬೈ: ಟೀಂ ಇಂಡಿಯಾಗೆ ಆಪತ್ಕಾಲದಲ್ಲಿ ಟೆಸ್ಟ್ ತಂಡದ ನಾಯಕರಾಗಿ ಆಧಾರವಾಗಿದ್ದ ಅಜಿಂಕ್ಯಾ ರೆಹಾನೆ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ತಂಡದ ನಾಯಕರಾಗಿದ್ದರು.

ಆದರೆ ಈ ಸರಣಿ ಗೆಲುವು ಸಿಕ್ಕರೂ ಅವರ ನಾಯಕತ್ವವನ್ನು ಯಾರೂ ಪರಿಗಣಿಸಲೇ ಇಲ್ಲ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಮುಂದೆ ಅವರು ಬೇಸರ ಹೊರಹಾಕಿದ್ದಾರೆ.

‘ನಾನು ಏನು ಮಾಡಿದ್ದೇನೆ ಎಂದು ನನಗೆ ಗೊತ್ತು. ಅದನ್ನು ಎಲ್ಲರಲ್ಲೂ ಹೇಳಿಕೊಂಡು ತಿರುಗಾಡುವುದು ನನ್ನ ಸ್ವಭಾವವಲ್ಲ. ಕೆಲವು ಬಾರಿ ಮೈದಾನದಲ್ಲಿ ಅಥವಾ ಡ್ರೆಸ್ಸಿಂಗ್ ರೂಂನಲ್ಲಿ ನಾನು ಕೈಗೊಂಡ ನಿರ್ಧಾರಗಳು ಯಶಸ್ವಿಯಾಗಿದ್ದು ಇದೆ. ಆದರೆ ಅದರ ಕ್ರೆಡಿಟ್ ಇನ್ಯಾರೋ ತೆಗೆದುಕೊಂಡರು. ಆದರೆ ಕೊನೆಯಲ್ಲಿ ಸರಣಿ ಗೆಲ್ಲುವುವು ಮುಖ್ಯವಾಗಿರುತ್ತದೆ. ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಿದ್ದು ಅವಿಸ್ಮರಣೀಯ ಗಳಿಗೆ’ ಎಂದು ರೆಹಾನೆ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಅಗತ್ಯವಿಲ್ಲ! ಬಿಸಿಸಿಐ ಮಾತಿಗೆ ಮನನೊಂದ ವೃದ್ಧಿಮಾನ್ ಸಹಾ