Select Your Language

Notifications

webdunia
webdunia
webdunia
webdunia

ನಿಮ್ಮ ಅಗತ್ಯವಿಲ್ಲ! ಬಿಸಿಸಿಐ ಮಾತಿಗೆ ಮನನೊಂದ ವೃದ್ಧಿಮಾನ್ ಸಹಾ

ನಿಮ್ಮ ಅಗತ್ಯವಿಲ್ಲ! ಬಿಸಿಸಿಐ ಮಾತಿಗೆ ಮನನೊಂದ ವೃದ್ಧಿಮಾನ್ ಸಹಾ
ಮುಂಬೈ , ಗುರುವಾರ, 10 ಫೆಬ್ರವರಿ 2022 (10:21 IST)
ಮುಂಬೈ: ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾಗೆ ಬಿಸಿಸಿಐ ಇನ್ನು ನಿಮ್ಮ ಅಗತ್ಯವಿಲ್ಲ. ಭವಿಷ್ಯದ ದೃಷ್ಟಿಯಿಂದ ಹೊಸ ಆಟಗಾರರಿಗೆ ಅವಕಾಶ ನೀಡುವುದಾಗಿ ಸ್ಪಷ್ಟವಾಗಿ ಹೇಳಿದೆ. ಇದು ಸಹಾ ಬೇಸರಕ್ಕೆ ಕಾರಣವಾಗಿದೆ.

ಇದೇ ಕಾರಣಕ್ಕೆ ವೃದ್ಧಿಮಾನ್ ಸಹಾ ಈಗ ಬಂಗಾಳ ರಣಜಿ ತಂಡದಿಂದಲೂ ಹೊರನಡೆದಿದ್ದಾರೆ. ಇತ್ತೀಚೆಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ ಸಹಾರನ್ನು ಅವಗಣಿಸಿ, ರಿಷಬ್ ಗೇ ಅವಕಾಶ ನೀಡಲಾಗುತ್ತಿದೆ.

ಇದೀಗ ಸ್ವತಃ ಬಿಸಿಸಿಐಯೇ ಇನ್ನು ನಿಮಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿರುವುದು ಸಹಾ ಬೇಸರಕ್ಕೆ ಕಾರಣವಾಗಿದೆ. ಕೆಲವು ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಮೇಲೆತ್ತಿದ್ದ ಆಟಗಾರನನ್ನು ಈ ರೀತಿ ನಡೆಸಿಕೊಂಡಿರುವುದು ನಿಜಕ್ಕೂ ವಿಪರ್ಯಾಸ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಗಿಂತ ಒಳ್ಳೆ ಕ್ಯಾಪ್ಟನ್ ಆರ್ ಸಿಬಿಗೆ ಸಿಗಲ್ಲ: ಹರ್ಭಜನ್ ಸಿಂಗ್