Publish Date: Fri, 11 Feb 2022 (08:40 IST)
Updated Date: Fri, 11 Feb 2022 (09:12 IST)
ಅಹಮ್ಮದಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಮೂರನೇ ಮತ್ತು ಔಪಚಾರಿಕ ಏಕದಿನ ಪಂದ್ಯ ನಡೆಯಲಿದೆ.
ಈಗಾಗಲೇ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಗೆದ್ದಿರುವುದರಿಂದ ಈ ಪಂದ್ಯಕ್ಕೆ ಮಹತ್ವವೇನೂ ಇಲ್ಲ. ಹಾಗಿದ್ದರೂ ಈ ಪಂದ್ಯ ಗೆದ್ದರೆ ಟೀಂ ಇಂಡಿಯಾ ವೈಟ್ ವಾಶ್ ಮಾಡಿಕೊಳ್ಳಲಿದೆ.
ಇನ್ನು, ಕೊರೋನಾದಿಂದಾಗಿ ತಂಡಕ್ಕೆ ಆಯ್ಕೆಯಾದರೂ ಶಿಖರ್ ಧವನ್, ಶ್ರೇಯಸ್ ಐಯರ್, ನವದೀಪ್ ಸೈನಿ ಮುಂತಾದ ಆಟಗಾರರಿಗೆ ಆಡುವ ಅವಕಾಶ ದೊರೆತಿರಲಿಲ್ಲ. ಈಗ ಇವರೆಲ್ಲಾ ಫಿಟ್ ಆಗಿದ್ದು, ಇಂದಿನ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ‍್ಯತೆಯಿದೆ. ಈ ಪಂದ್ಯ ಮಧ‍್ಯಾಹ್ನ 1.30 ಕ್ಕೆ ಆರಂಭವಾಗುವುದು.