Select Your Language

Notifications

webdunia
webdunia
webdunia
webdunia

ಕೆಕೆಆರ್ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ ಭಾಷಣ

ಕೆಕೆಆರ್ ಸೋಲಿನ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಕೊಹ್ಲಿ ಭಾಷಣ
ದುಬೈ , ಬುಧವಾರ, 22 ಸೆಪ್ಟಂಬರ್ 2021 (09:01 IST)
ದುಬೈ: ಕೆಕೆಆರ್ ತಂಡದ ವಿರುದ್ಧ ಪಂದ್ಯ ಸೋತ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ಡ್ರೆಸ್ಸಿಂಗ್ ರೂಂನಲ್ಲಿ ನಾಯಕ ವಿರಾಟ್ ಕೊಹ್ಲಿ ಸ್ಪೂರ್ತಿದಾಯಕ ಭಾಷಣ ಮಾಡಿದ್ದಾರೆ.


ಕೆಕೆಆರ್ ತಂಡದ ವಿರುದ್ಧ 9 ವಿಕೆಟ್ ಗಳಿಂದ ಹೀನಾಯ ಸೋಲುಂಡ ಆರ್ ಸಿಬಿ ಆಟಗಾರರಲ್ಲಿ ನಾಯಕ ಕೊಹ್ಲಿ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ. ಸೋಲಿನಿಂದ ಕುಗ್ಗದಂತೆ ಆತ್ಮವಿಶ್ವಾಸ ಬೆಳೆಸುವ ಪ್ರಯತ್ನ ಮಾಡಿದ್ದಾರೆ.

‘ಈ ಸೋಲನ್ನು ಸ್ವೀಕರಿಸಿ ಮುನ್ನಡೆಯಲು ನಾವು ಕಲಿಯಬೇಕು. ಈ ಸೋಲು ನಮ್ಮಲ್ಲಿ ಗೆಲುವಿನ ಹಸಿವು ಹೆಚ್ಚಿಸಬೇಕು. ಸೋಲನಿಂದ ಕುಗ್ಗದಂತೆ ಅದನ್ನು ಸಮನಾಗಿ ಸ್ವೀಕರಿಸಲು ಕಲಿಯಬೇಕು’ ಎಂದು ಕೊಹ್ಲಿ ಹುಡುಗರಲ್ಲಿ ಸ್ಪೂರ್ತಿ ತುಂಬಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 14: ಗೆಲುವಿನ ಹಂತಕ್ಕೆ ಹೋಗಿ ಮುಗ್ಗರಿಸುವ ಚಾಳಿ ಮುಂದುವರಿಸಿದ ಪಂಜಾಬ್