Publish Date: Tue, 25 Aug 2020 (11:23 IST)
Updated Date: Tue, 25 Aug 2020 (11:25 IST)
ದುಬೈ: ಐಪಿಎಲ್ 13 ಆಡಲು ಯುಎಇನಲ್ಲಿರುವ ಬೀಡುಬಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಆ ನಿರೀಕ್ಷೆಗೆ ತಕ್ಕ ಆಟವಾಡಲು ನಾಯಕ ಕೊಹ್ಲಿ ಆಟಗಾರರಿಗೆ ಸೂಚನೆ ನೀಡಿದ್ದಾರೆ.
ನಮ್ಮಲ್ಲಿ ಯಾರೊಬ್ಬರು ಒಂದೇ ಒಂದು ತಪ್ಪು ಮಾಡಿದರೂ ಅದು ಇಡೀ ಕೂಟದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಸದಾ ಎಚ್ಚರಿಕೆಯಿಂದಿರಬೇಕು, ನಮ್ಮ ಉತ್ಸಾಹ ಯಾವತ್ತೂ ಕುಗ್ಗಬಾರದು ಎಂದು ಕೊಹ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಮೀಟಿಂಗ್ ನಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.