Publish Date: Mon, 24 Aug 2020 (13:06 IST)
Updated Date: Mon, 24 Aug 2020 (13:07 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ಒಂದು ತಿಂಗಳ ಮುಂಚಿತವಾಗಿ ಯುಎಇಗೆ ಕಾಲಿಟ್ಟಿರುವ ಎಲ್ಲಾ ಕ್ರಿಕೆಟಿಗರ ಪರಿಸ್ಥಿತಿ ಈಗ ಹೇಗಾಗಿದೆ ಗೊತ್ತಾ?
ಎಲ್ಲಾ ಕ್ರಿಕೆಟಿಗರೂ ಕಡ್ಡಾಯ ಕ್ವಾರಂಟೈನ್ ನಲ್ಲಿದ್ದಾರೆ. ಹಾಗಾಗಿ ದುಬೈನ ಐಷಾರಾಮಿ ಹೋಟೆಲ್ ಗಳಲ್ಲಿ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಹೋಟೆಲ್ ಕೊಠಡಿಯೊಳಗೇ ವರ್ಕೌಟ್ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕೊರೋನಾ ಪರೀಕ್ಷೆಗೊಳಗಾದ ಬಳಿಕವೇ ಆಟಗಾರರು ತರಬೇತಿಗೆ ಹಾಜರಾಗಬಹುದಾಗಿದೆ.