Publish Date: Sun, 23 Aug 2020 (11:41 IST)
Updated Date: Sun, 23 Aug 2020 (11:43 IST)
ದುಬೈ: ಐಪಿಎಲ್ 13 ಆಡಲು ದುಬೈಗೆ ತೆರಳಿರುವ ಎಲ್ಲಾ ಕ್ರಿಕೆಟಿಗರೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಗೊಳಗಾಬೇಕಿದೆ. ಈ ಅವಸ್ಥೆಯನ್ನು ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಶಿಖರ್ ಧವನ್ ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಧವನ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ವಿಡಿಯೋ ಒಂದನ್ನು ಪ್ರಕಟಿಸಿದ್ದು, ಹಳೆಯ ಹಿಂದಿ ಹಾಡು ಹಾಕಿಕೊಂಡು ಹೋಟೆಲ್ ಕೊಠಡಿಯ ಕಿಟಿಕಿಯಿಂದ ಹೊರಗೆ ಇಣುಕಿ ನೋಡುತ್ತಾ ಕೊನೆಗೆ ಮರಳಿ ಬಂದು ನೆಲದ ಮೇಲೆ ಸೂರು ನೋಡುತ್ತಾ ಬೇಸರದಲ್ಲಿ ಮಲಗುವ ದೃಶ್ಯವೊಂದನ್ನು ಪ್ರಕಟಿಸಿದ್ದು, ದುಬೈಗೆ ಬಂದ ನಮ್ಮ ಅವಸ್ಥೆ ಹೀಗಿದೆ ನೋಡಿ ಎಂದಿದ್ದಾರೆ.