Select Your Language

Notifications

webdunia
webdunia
webdunia
Wednesday, 9 April 2025
webdunia

ಮ್ಯಾನೇಜರ್ ಗಾಗಿ ವಿಮಾನದಲ್ಲಿ ತನ್ನ ಸೀಟ್ ಬಿಟ್ಟುಕೊಟ್ಟ ಧೋನಿ! ಕಾರಣವೇನು ಗೊತ್ತಾ?!

ಧೋನಿ
ಚೆನ್ನೈ , ಶನಿವಾರ, 22 ಆಗಸ್ಟ್ 2020 (12:17 IST)
ಚೆನ್ನೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಯುಎಇಗೆ ಪ್ರಯಾಣ ಬೆಳೆಸಿದೆ. ಈ ನಡುವೆ ಧೋನಿ ತಮ್ಮ ಸೀಟ್ ನ್ನು ವಿಮಾನದಲ್ಲಿ ಸಿಎಸ್ ಕೆ ತಂಡದ ನಿರ್ದೇಶಕರಿಗೆ ಬಿಟ್ಟುಕೊಟ್ಟು ಸುದ್ದಿಯಾಗಿದ್ದಾರೆ.


ಧೋನಿ ನಾಯಕರಾಗಿರುವ ಕಾರಣ ತಂಡದ ಜತೆ ಪ್ರಯಾಣ ಬೆಳೆಸುವಾಗ ಅವರಿಗೆ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟ್  ನ ಸೌಲಭ್ಯ ಸಿಗುತ್ತದೆ. ಆದರೆ ಧೋನಿ ಯಾವತ್ತೂ ಇದನ್ನು ಬಳಸಿಕೊಳ್ಳದೇ ತಮ್ಮ ಸೀಟ್ ನ್ನು ಇನ್ನೊಬ್ಬರಿಗೆ ಬಿಟ್ಟುಕೊಡುತ್ತಾರೆ ಎಂದು ಈ ಮೊದಲೂ ಸುದ್ದಿಯಾಗಿತ್ತು.

ಈಗಲೂ ಅದನ್ನೇ ಮಾಡಿದ್ದಾರೆ. ತಂಡದ ನಿರ್ದೇಶಕ ಜಾರ್ಜ್ ಜಾನ್ ಟ್ವೀಟ್ ಮಾಡಿ ಈ ವಿಷಯವನ್ನು ತಿಳಿಸಿದ್ದಾರೆ. ವಿಮಾನವೇರಿದ ಬಳಿಕ ತಮಗಾಗಿ ನಿಗದಿಯಾಗಿದ್ದ ಬ್ಯುಸಿನೆಸ್ ಕ್ಲಾಸ್ ಸೀಟ್ ನ್ನು ಧೋನಿ ನನಗೆ ಬಿಟ್ಟುಕೊಟ್ಟರು. ನಿಮ್ಮ ಕಾಲುಗಳು ತುಂಬಾ ಉದ್ದವಿದೆಯಲ್ಲಾ. ನಿಮಗೆ ಎಕಾನಮಿ ಕ್ಲಾಸ್ ನಲ್ಲಿ ಸರಿ ಹೋಗಲ್ಲ ಎಂದು ತಾವು ಸಾಮಾನ್ಯ ಸೀಟ್ ನಲ್ಲಿ ಕುಳಿತು ನನಗೆ ಅವರ ಸೀಟ್ ಬಿಟ್ಟುಕೊಟ್ಟರು ಎಂದು ಜಾರ್ಜ್ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿ ತಂಡದ ಜತೆಗೆ ಯುಎಇಗೆ ತೆರಳಿದ ಸ್ಯಾಂಡಲ್ ವುಡ್ ನಟ