ಮುಂಬೈ: ಐಪಿಎಲ್ 13 ಈ ಬಾರಿ ಯುಎಇನಲ್ಲಿ ನಡೆಯುತ್ತಿದ್ದು, ಮುಂದಿನ ತಿಂಗಳು ನಡೆಯಲಿರುವ ಕ್ರಿಕೆಟ್ ಜಾತ್ರೆಗೆ ಈಗಾಗಲೇ ಕೆಲವು ತಂಡಗಳು ಯುಎಇಗೆ ಬಂದಿಳಿದಿವೆ.
ಮೊದಲನೆಯದಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ಯುಎಇಗೆ ತೆರಳಿದ್ದು, ಅದಾದ ಬಳಿಕ ರಾಜಸ್ಥಾನ್ ರಾಯಲ್ಸ್, ಕೋಲ್ಕೊತ್ತಾ ನೈಟ್ ರೈಡರ್ಸ್ ಕೂಡಾ ಯುಎಎಇಗೆ ಬಂದಿಳಿದಿವೆ.
ಇನ್ನೀಗ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತೆರಳಬೇಕಿದೆ. ಮುಂಬೈ ತಂಡ ಇಂದು ವಿಶೇಷ ವಿಮಾನ ಮೂಲಕ ಅರಬರ ರಾಷ್ಟ್ರಕ್ಕೆ ತೆರಳುವ ಸಾಧ‍್ಯತೆಯಿದೆ.