Publish Date: Thu, 20 Aug 2020 (13:39 IST)
Updated Date: Thu, 20 Aug 2020 (13:40 IST)
ಚೆನ್ನೈ: ಐಪಿಎಲ್ 13 ಯಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಪ್ರಯಾಣಿಸಲ್ಲ. ಇದಕ್ಕೆ ಕಾರಣವೇನು ಗೊತ್ತಾ?
ಹರ್ಭಜನ್ ಸಿಂಗ್ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅಮ್ಮನಿಗಾಗಿ ಚೆನ್ನೈ ತಂಡದ ಜತೆಗೇ ಯುಎಇಗೆ ತೆರಳದೇ ಇರಲು ಭಜಿ ನಿರ್ಧರಿಸಿದ್ದಾರೆ.
ಈಗಾಗಲೇ ಧೋನಿ ನೇತೃತ್ವದಲ್ಲಿ ಚೆನ್ನೈನಲ್ಲಿ ಸಿಎಸ್ ಕೆ ಅಭ‍್ಯಾಸ ಆರಂಭಿಸಿದೆ. ಆದರೆ ರವೀಂದ್ರ ಜಡೇಜಾ, ಹರ್ಭಜನ್ ಅಲ್ಲದೆ, ಶ್ರಾದ್ಧೂಲ್ ಠಾಕೂರ್ ಇನ್ನೂ ಬಂದಿಲ್ಲ. ದುಬೈಗೆ ತೆರಳುವ ಮೊದಲು ಆಟಗಾರರು ಕೊರೋನಾ ಟೆಸ್ಟ್ ಗೊಳಗಾಗಲಿದ್ದಾರೆ.