Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಕನಸಿನ ಆತ್ಮ ನಿರ್ಭರ್ ಗೆ ಕೊಳ್ಳಿಯಿಟ್ಟ ಐಪಿಎಲ್ 13

ಪ್ರಧಾನಿ ಮೋದಿ
ಮುಂಬೈ: ಭಾರತ ಮತ್ತು ಚೀನಾ ನಡುವೆ ಸಂಬಂಧ ಸರಿಯಿಲ್ಲ ಎನ್ನುವ ಕಾರಣಕ್ಕೆ ಚೀನಾ ಮೂಲದ ವಿವೋ ಕಂಪನಿ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದು, ಡ್ರೀಮ್ 11 ಸಂಸ್ಥೆ ಹೊಸದಾಗಿ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆದರೆ ಇದರಿಂದ ಪ್ರಧಾನಿ ಮೋದಿಯ ಆತ್ಮನಿರ್ಭರ್ ಭಾರತ ಕನಸಿಗೆ ಕೊಳ್ಳಿಯಿಟ್ಟಂತಾಗಿದೆ.


ಡ್ರೀಮ್ 11 ಕೂಡಾ ಚೀನಾ ಬೆಂಬಲಿತ ಕಂಪನಿಯೇ. ಈ ಕಂಪನಿಯಲ್ಲೂ ಚೀನಾ ಪಾಲುದಾರಿಕೆಯಿದೆ. ಹೀಗಾಗಿ ನಮ್ಮ ದೇಶದ ಕಂಪನಿಯೇ ಐಪಿಎಲ್ ನಲ್ಲಿ ಹೂಡಿಕೆ ಮಾಡುವ ಮೂಲಕ ನಮ್ಮ ದೇಶದ ಕ್ರೀಡಾಕೂಟ ಸ್ವದೇಶೀ ಎನಿಸಿಕೊಳ್ಳಬೇಕು ಎಂಬ ಅಭಿಮಾನಿಗಳ ಬಯಕೆಯೂ ಈಡೇರಿಲ್ಲ.

ಈ ಬಗ್ಗೆ ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಆದಿತ್ಯ ವರ್ಮ ಪ್ರತಿಕ್ರಿಯಿಸಿದ್ದು, ಬಿಸಿಸಿಐ ಡ್ರೀಮ್ 11 ಗೆ ಪ್ರಾಯೋಜತ್ವ ನೀಡುವ ಮೂಲಕ ಪ್ರಧಾನಿ ಮೋದಿಯ ಆತ್ಮನಿರ್ಭರ ಭಾರತ ಕನಸನ್ನು ನುಚ್ಚು ನೂರು ಮಾಡಿದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಗೆ ತಕ್ಕ ವಿದಾಯ ಹೇಳಲು ಪ್ಲ್ಯಾನ್ ಮಾಡಿದ್ದೆವು: ಕೆಎಲ್ ರಾಹುಲ್