Publish Date: Wed, 19 Aug 2020 (11:50 IST)
Updated Date: Wed, 19 Aug 2020 (11:52 IST)
ಮುಂಬೈ: ಟೀಂ ಇಂಡಿಯಾ ಆಟಗಾರರೆಲ್ಲರೂ ತಮ್ಮ ಮೆಚ್ಚಿನ ನಾಯಕನಾಗಿದ್ದ ಎಂಎಸ್ ಧೋನಿಗೆ ಗೌರವಯುತ ವಿದಾಯ ಹೇಳಲು ಯೋಚನೆ ಮಾಡಿದ್ದರಂತೆ. ಆದರೆ ಆಗಿದ್ದೇ ಬೇರೆ ಎಂದು ಕ್ರಿಕೆಟಿಗ ಕೆಎಲ್ ರಾಹುಲ್ ಹೇಳಿಕೊಂಡಿದ್ದಾರೆ.
ಧೋನಿಯನ್ನು ಇಷ್ಟಪಡುವ ಯಾರೇ ಆದರೂ ಅವರಿಗೆ ಗೌರವಯುತ ವಿದಾಯ ಬಯಸುತ್ತಾರೆ. ನಾವೂ (ಟೀಂ ಇಂಡಿಯಾ ಆಟಗಾರರು) ಧೋನಿಗೆ ಉತ್ತಮ ವಿದಾಯ ಹೇಳಲು ಪ್ಲ್ಯಾನ್ ಮಾಡಿದ್ದೆವು. ಆದರೆ ಅವರು ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದು ನಮಗೆಲ್ಲಾ ಶಾಕ್ ಆಗಿದೆ ಎಂದು ರಾಹುಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.