Publish Date: Tue, 18 Aug 2020 (11:33 IST)
Updated Date: Tue, 18 Aug 2020 (11:34 IST)
ಚೆನ್ನೈ: ಧೋನಿಗೆ ಟೀಂ ಇಂಡಿಯಾದಿಂದ ವಿದಾಯ ಪಂದ್ಯ ನಡೆಯಲಿಲ್ಲ ಎಂದು ಬೇಸರಿಸುವ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಿಂದ ನಿವೃತ್ತರಾದರೂ ಧೋನಿ ಇನ್ನೂ ಐಪಿಎಲ್ ನಲ್ಲಿ ಆಡುತ್ತಿದ್ದಾರೆ.
ಹೀಗಾಗಿ ಅಂಗಣದಲ್ಲಿ ಧೋನಿ ಆಟವನ್ನು ನೋಡುವ ಭಾಗ್ಯ ಇನ್ನೂ ಅಭಿಮಾನಿಗಳಿಗಿದೆ. ಹಾಗಿದ್ದರೂ ಧೋನಿ ಕೊನೆಯ ಪಂದ್ಯವಾಡೋದು ಯಾವಾಗ?
ಈ ಬಗ್ಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆನ್ನೈನ ಚಿಪಾಕ್ ಮೈದಾನದಲ್ಲೇ ಆಡುವುದು ಪಕ್ಕಾ ಎಂದು ಅವರು ಹೇಳಿದ್ದಾರೆ. ಧೋನಿ ಇರುವವರೆಗೂ ಚೆನ್ನೈ ತಂಡಕ್ಕೆ ಅವರೇ ನಾಯಕರಾಗುತ್ತಾರೆ. ಐಪಿಎಲ್ ನಲ್ಲಿ ಕೊನೆಯ ಪಂದ್ಯವನ್ನು ಅವರು ಚೆನ್ನೈನಲ್ಲೇ ಆಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.