Select Your Language

Notifications

webdunia
webdunia
webdunia
webdunia

ಧೋನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ ಟಾಲಿವುಡ್ ಸಿನಿಮಾ ರಂಗ

ಹೈದರಾಬಾದ್
ಹೈದರಾಬಾದ್ : ಭಾರತೀಯ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಆಗಿದ್ದ ಧೋನಿ ಅವರು ನಿವೃತ್ತಿ ಘೋಷಣೆ ಮಾಡುವ ವಿಚಾರದ ಬಗ್ಗೆ  ಟಾಲಿವುಡ್ ಚಿತ್ರರಂಗ ಬೇಸರಗೊಂಡಿದ್ದು, ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ನಟ ಮಹೇಶ್ ಬಾಬು ಈ ಬಗ್ಗೆ ಟ್ವೀಟ್ ಮಾಡಿ, ವರ್ಲ್ಡ್ ಕಪ್ ಚಾಂಪಿಯನ್ಸ್ 2011 ಇಂಡಿಯಾ! ಧೋನಿಯವರ ಆ ಅಭೂತಪೂರ್ವ ಸಿಕ್ಸರ್ ಅನ್ನು ಹೇಗೆ ಮರೆಯಲು ಸಾಧ್ಯ. ಮಹೇಂದ್ರ ಧೋನಿ ಲೆಜೆಂಡ್ , ತಲೆ ಬಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಹಾಗೆ ನಟಿ ಅನುಷ್ಕಾಶೆಟ್ಟಿ ಟ್ವೀಟ್ ಮಾಡಿ, ನೀವು ಚಾಂಪಿಯನ್ ಗಳ ಚಾಂಪಿಯನ್. ನೀವು ನಮ್ಮ ಚಾಂಪಿಯನ್ ಸಾಮರ್ಥ್ಯದ ಮೇಲೆ ನಂಬಿಕೆ ಇಡುವಂತೆ ಮಾಡಿದಿರಿ. ಈಗ ನೀವು ನಿವೃತ್ತಿಯಾಗುತ್ತಿರುವುದು ಬೇಸರತಂದಿದೆ ಎಂದು ತಿಳಿಸಿದ್ದಾರೆ.
ಹಾಗೇ ಖ್ಯಾತ ನಿರ್ದೇಶಕ ರಾಜಮೌಳಿ , ನೀವು ನಮಗೆ ಸ್ಪೂರ್ತಿ. ನಿಮ್ಮ ನಿವೃತ್ತಿಯ ಗಳಿಗೆ ನಮಗೆ ಕಷ್ಟ, ನೀವು ಮುಂದಿನ ತಲೆಮಾರಿಗೂ ಸ್ಫೂರ್ತಿಯ ಸೆಲೆ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾಲಿ ಧನಂಜಯ್ ಹೊಸ ಚಿತ್ರಕ್ಕೆ ವಿಶಿಷ್ಟ ಟೈಟಲ್