Publish Date: Sun, 16 Aug 2020 (12:33 IST)
Updated Date: Sun, 16 Aug 2020 (12:35 IST)
ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅವರ ಗುಡ್ ಲಕ್ ಸಿನಿಮಾ ಟೀಸರ್ ಸ್ವಾತಂತ್ರ್ಯ ದಿನಾಚರಣೆಯಂದು ರಿಲೀಸ್ ಆಗಿದೆ. ಸ್ಟಾರ್ ನಟರು ಈ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ವೇಷದಲ್ಲಿ ನಟಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮೂರು ಭಾಷೆಯಲ್ಲಿ ರಿಲೀಸ್ ಆಗಲಿದೆ. ಹಾಗಾಗಿ ಈ ಮೂರು ಭಾಷೆಯಲ್ಲಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ತೆಲುಗು ವರ್ಷನ್ ಟೀಸರ್ ನ್ನು ತೆಲುಗಿನ ನಟ ಪ್ರಭಾಸ್ ಅವರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಇನ್ನೂ ತಮಿಳು ವರ್ಷನ್ ಟೀಸರನ್ನು ವಿಜಯ್ ಸೇತುಪತಿ ರಿಲೀಸ್ ಮಾಡಿದ್ದಾರೆ. ಹಾಗೇ ಮಲಯಾಳಂ ವರ್ಷನ್ ನ್ನು ನಟ ಪೃಥ್ವಿರಾಜ್ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.