Select Your Language

Notifications

webdunia
webdunia
webdunia
webdunia

ಆಂಧ್ರದಲ್ಲಿ ಕೊರೊನಾ ರೋಗಿಗಳು ಬೆಂಕಿಗಾಹುತಿ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ವಿವಾದ ಎಬ್ಬಿಸಿದ ನಟ

ಆಂಧ್ರದಲ್ಲಿ ಕೊರೊನಾ ರೋಗಿಗಳು ಬೆಂಕಿಗಾಹುತಿ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ವಿವಾದ ಎಬ್ಬಿಸಿದ ನಟ
ಹೈದರಾಬಾದ್ , ಸೋಮವಾರ, 17 ಆಗಸ್ಟ್ 2020 (10:11 IST)
ಹೈದರಾಬಾದ್ : ಆಂಧ್ರ ಪ್ರದೇಶದಲ್ಲಿ ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ ಹೋಟೆಲ್ ಒಂದಕ್ಕೆ ಬೆಂಕಿ ಬಿದ್ದು ಕೊರೊನಾ ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೆಲುಗಿನ ನಟರೊಬ್ಬರು ಟ್ವೀಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಹೌದು. ಈ ಹಿಂದೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ  ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ ಹೋಟೆಲ್ ಒಂದಕ್ಕೆ ಬೆಂಕಿ ಬಿದ್ದು 10 ಮಂದಿ ಸುಟ್ಟು ಭಸ್ಮವಾಗಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು,  ಆಸ್ಪತ್ರೆ, ಸರ್ಕಾರ, ಹೋಟೆಲ್ ಮೇಲೆ ಆರೋಪ ಮಾಡಲಾಗಿತ್ತು.

ಇದೀಗ ತೆಲುಗಿನ ನಟ ರಾಮ್ ಪೋತಿನೇನಿ ಈ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಕೊರೊನಾ ಆಸ್ಪತ್ರೆಯನ್ನಾಗಿ ಮಾಡಿದ ಹೋಟೆಲ್ ನಲ್ಲಿ ಪೀಸ್ ನ್ನು ಹೋಟೆಲ್ ನವರೇ ತೆಗೆದುಕೊಳ್ಳುತ್ತಿದ್ದರು. ಅವರೇ ನಿರ್ವಹಣೆ ಮಾಡುತ್ತಿದ್ದರು. ಇದಕ್ಕೆ ವೈದ್ಯರು ಜವಬ್ದಾರರಲ್ಲ. ಈ ಬೆಂಕಿ ಅವಘಡ ಆಕಸ್ಮಿಕವಲ್ಲ. ಈ ಅವಘಡದ ಹಿಂದೆ ಆಂಧ್ರದ ಸಿಎಂ ಗೆ ಕಪ್ಪು ಮಸಿ ಬಳಿಯುವ ಯತ್ನ ಅಡಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಲಿಸಿದ ಅಭಿಮಾನಿಗಳ ಹಾರೈಕೆ: ಎಸ್ ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಚೇತರಿಕೆ