Publish Date: Fri, 21 Aug 2020 (10:02 IST)
Updated Date: Fri, 21 Aug 2020 (10:03 IST)
ನವದೆಹಲಿ: ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿಯಾದ ಧೋನಿಗೆ ಪ್ರಧಾನಿ ಮೋದಿ ಸುದೀರ್ಘ ಪತ್ರ ಬರೆದು ದೇಶದ ಕ್ರಿಕೆಟ್ ಗೆ ಸಲ್ಲಿಸಿದ ಕೊಡುಗೆಯನ್ನು ಕೊಂಡಾಡಿದ್ದರು. ಇದೀಗ ಧೋನಿ ಜತೆಗೇ ನಿವೃತ್ತಿ ಘೋಷಿಸಿದ್ದ ಸುರೇಶ್ ರೈನಾಗೂ ಪತ್ರ ಬರೆದು ಧನ್ಯವಾದ ಸಲ್ಲಿಸಿದ್ದಾರೆ.
ಸುರೇಶ್ ರೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಪತ್ರದ ಪ್ರತಿಯನ್ನು ಪ್ರಕಟಿಸಿದ್ದು, ಒಂದು ದೇಶದ ಪ್ರಧಾನಿಯಿಂದಲೇ ಈ ರೀತಿ ಮಾಡಿದ ಕೆಲಸಕ್ಕೆ ಅಭಿನಂದನೆ ಪಡೆಯುವುದಕ್ಕಿಂತ ಹೆಗ್ಗಳಿಕೆ ಬೇರೊಂದಿಲ್ಲ ಎಂದು ಧನ್ಯವಾದ ಸಲ್ಲಿಸಿದ್ದಾರೆ.
ಈ ಪತ್ರದಲ್ಲಿ ಪ್ರಧಾನಿ ಮೋದಿ ಸುದೀರ್ಘವಾಗಿ ರೈನಾ ಸಾಧನೆಯನ್ನು ಕೊಂಡಾಡಿರುವುದಲ್ಲದೆ, ಅವರ ಮುಂದಿನ ಜೀವನಕ್ಕೂ ಶುಭ ಹಾರೈಸಿದ್ದಾರೆ.