Select Your Language

Notifications

webdunia
webdunia
webdunia
webdunia

ಚೀನಾದವರು ಎನ್ನಬೇಡಿ: ಐಪಿಎಲ್ ಪ್ರಾಯೋಜಕತ್ವ ವಿವಾದಕ್ಕೆ ಡ್ರೀಮ್ 11 ಸ್ಪಷ್ಟನೆ

ಚೀನಾದವರು ಎನ್ನಬೇಡಿ: ಐಪಿಎಲ್ ಪ್ರಾಯೋಜಕತ್ವ ವಿವಾದಕ್ಕೆ ಡ್ರೀಮ್ 11 ಸ್ಪಷ್ಟನೆ
ಮುಂಬೈ , ಭಾನುವಾರ, 23 ಆಗಸ್ಟ್ 2020 (10:18 IST)
ಮುಂಬೈ: ವಿವೋ ಹಿಂದೆ ಸರಿದ ಬಳಿಕ ಐಪಿಎಲ್ 13 ಟೈಟಲ್ ಪ್ರಾಯೋಜಕತ್ವ ವಹಿಸಿಕೊಂಡ ಡ್ರೀಮ್ 11 ಸಂಸ್ಥೆಯಲ್ಲೂ ಚೀನಾ ಷೇರು ಹೊಂದಿದ್ದರಿಂದ ಹಲವರು ಟೀಕೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಡ್ರೀಮ್ 11 ಸ್ಪಷ್ಟನೆ ನೀಡಿದೆ.

 
ನಮ್ಮನ್ನು ಚೀನಾ ಕಂಪನಿ ಎನ್ನಬೇಡಿ. ನಾವು ಪಕ್ಕಾ ಭಾರತ ನೆಲದಲ್ಲೇ ಬೆಳೆದ ಭಾರತೀಯ ಬ್ರಾಂಡ್ ಕಂಪನಿ ಎಂದು ಡ್ರೀಮ್ 11 ಸ್ಪಷ್ಟನೆ ನೀಡಿದೆ. ಈ ಬಾರಿಯ ಟೈಟಲ್ ಪ್ರಾಯೋಜಕತ್ವವನ್ನು ಡ್ರೀಮ್ 11 ಬರೋಬ್ಬರಿ 222 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತ್ತು. ಇದರ ಬೆನ್ನಲ್ಲೇ ಈ ಕಂಪನಿಯಲ್ಲಿ ಚೀನಾ ಷೇರು ಹೊಂದಿದೆ ಎಂಬುದು ಅಪಸ್ವರವೇಳಲು ಕಾರಣವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮ್ಯಾನೇಜರ್ ಗಾಗಿ ವಿಮಾನದಲ್ಲಿ ತನ್ನ ಸೀಟ್ ಬಿಟ್ಟುಕೊಟ್ಟ ಧೋನಿ! ಕಾರಣವೇನು ಗೊತ್ತಾ?!