Publish Date: Tue, 25 Aug 2020 (10:27 IST)
Updated Date: Tue, 25 Aug 2020 (10:29 IST)
ದುಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಬಗ್ಗೆ ಕ್ರಿಕೆಟಿಗ ಸುರೇಶ್ ರೈನಾ ಭಾವುಕರಾಗಿ ಮಾತನಾಡಿದ್ದಾರೆ.
ಸದ್ಯಕ್ಕೆ ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈನಲ್ಲಿ ಕ್ವಾರಂಟೈನ್ ನಲ್ಲಿರುವ ರೈನಾ ಬಿಡುವಿನ ವೇಳೆ ಸುಶಾಂತ್ ಹಾಡುಗಳನ್ನು ಕೇಳುತ್ತಾ ಅವರ ಬಗ್ಗೆ ಭಾವುಕರಾಗಿ ಬರೆದಿದ್ದಾರೆ. ‘ನಿಮ್ಮನ್ನು ಪ್ರತಿದಿನವೂ ನೆನೆಸಿಕೊಳ್ಳುವೆ. ನೀವು ನಮ್ಮೆಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದೀರಿ. ನಮ್ಮ ನಾಯಕರು, ಸರ್ಕಾರದ ಮೇಲೆ ವಿಶ್ವಾಸವಿದೆ. ನಿಮ್ಮ ಸಾವಿನ ಸತ್ಯಾಂಶ ಏನೆಂದು ಹೊರಬರಬಹುದು ಎಂದು ನಂಬಿದ್ದೇನೆ’ ಎಂದು ಹೇಳಿದ್ದಾರೆ.