Publish Date: Sun, 30 Aug 2020 (13:16 IST)
Updated Date: Sun, 30 Aug 2020 (13:17 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದಿರುವ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ನೆಟ್ ಪ್ರಾಕ್ಟೀಸ್ ಸೆಷನ್ ಗೆ ಮರಳಿದೆ.
ಕ್ವಾರಂಟೈನ್ ಅವಧಿ ಮುಗಿಸಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಪಡೆ ನಿನ್ನೆಯಿಂದ ಮೊದಲ ಅಭ್ಯಾಸದ ಅವಧಿ ಪೂರೈಸಿದೆ. ಕ್ಯಾಪ್ಟನ್ ರೋಹಿತ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ವಿಚಾರವನ್ನು ತಿಳಿಸಿದ್ದು, ಬಹಳ ದಿನಗಳ ನಂತರ ನೆಟ್ ಪ್ರಾಕ್ಟೀಸ್ ಮಾಡಿದ ಖುಷಿ ಹಂಚಿಕೊಂಡಿದ್ದಾರೆ. ಕೆಕೆಆರ್, ದೆಹಲಿ ಬಿಟ್ಟು ಉಳಿದೆಲ್ಲಾ ತಂಡಗಳು ಈಗ ಅಭ್ಯಾಸ ಕಣಕ್ಕಿಳಿದಂತಾಗಿದೆ.