Publish Date: Sun, 30 Aug 2020 (10:57 IST)
Updated Date: Sun, 30 Aug 2020 (10:59 IST)
ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮತ್ತೋರ್ವ ಕ್ರಿಕೆಟಿಗನಿಗೆ ಕೊರೋನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಇದರಿಂದ ಚೆನ್ನೈ ಪಾಳಯದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.
ಮೊನ್ನೆಯಷ್ಟೇ ಚೆನ್ನೈ ತಂಡದ ವೇಗಿ ದೀಪಕ್ ಚಹರ್ ಮತ್ತು 12 ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಇರುವುದು ಪತ್ತೆಯಾಗಿತ್ತು. ಇದೀಗ ಕ್ರಿಕೆಟಿಗ ರುತುರಾಜ್ ಗಾಯಕ್ ವಾಡ್ ಗೂ ಕೊರೋನಾ ದೃಢಪಟ್ಟಿದೆ.
ಕೊರೋನಾ ಪತ್ತೆಯಾದ ಬೆನ್ನಲ್ಲೇ ಚೆನ್ನೈ ತಂಡ ಕ್ವಾರಂಟೈನ್ ಗೊಳಗಾಗಿದೆ. ಕೊರೋನಾ ಕೇಸ್ ಪತ್ತೆಯಾದ ಹಿನ್ನಲೆಯಲ್ಲೂ ಬಿಸಿಸಿಐ ಕೂಡಾ ಐಪಿಎಲ್ ತಯಾರಿಗೆ ತಡೆ ಒಡ್ಡಿದೆ.