ದುಬೈ: ಐಪಿಎಲ್ ಆಡಲು ದುಬೈಗೆ ಬಂದಿಳಿದಿರುವ ಸಿಎಸ್ ಕೆ ತಂಡಕ್ಕೆ ಕೊರೋನಾ ಶಾಕ್ ಸಿಕ್ಕಿದೆ. ವೇಗಿ ದೀಪಕ್ ಚಹರ್ ಸೇರಿದಂತೆ 12 ಸಹಾಯಕ ಸಿಬ್ಬಂದಿಗೂ ಕೊರೋನಾ ಸೋಂಕು ತಗುಲಿರುವುದು ಐಪಿಎಲ್ ಕೂಟದ ಮೇಲೆ ಕರಿ ನೆರಳು ಬೀರಿದೆ.
ಇದೀಗ ಸಿಎಸ್ ಕೆ ಪಾಳಯದಲ್ಲಿ ಕೊರೋನಾ ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ಬಿಸಿಸಿಐ ಐಪಿಎಲ್ ಕೂಟದ ವೇಳಾಪಟ್ಟಿ ಬಿಡುಗಡೆ ಮಾಡುವುದನ್ನೂ ತಾತ್ಕಾಲಿಕವಾಗಿ ತಡೆಹಿಡಿದಿದೆ. ಕೊರೋನಾ ಪ್ರಕರಣ ಕಂಡುಬಂದ ಹಿನ್ನಲೆಯಲ್ಲಿ ಬೇರೆ ಯಾವುದೇ ತೊಂದರೆಯಾಗದಂತೆ ಬಿಸಿಸಿಐ ತಕ್ಷಣ ಕಾರ್ಯಪ್ರವೃತ್ತವಾಗಿದೆ.