Publish Date: Sun, 30 Aug 2020 (10:26 IST)
Updated Date: Sun, 30 Aug 2020 (10:29 IST)
ಚೆನ್ನೈ: ಐಪಿಎಲ್ ಆಡಲು ದುಬೈಗೆ ಬಂದಿಳಿದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊರೋನಾ ಮಹಾಮಾರಿ ವಕ್ಕರಿಸಲು ಆ ಒಂದು ಎಡವಟ್ಟು ಕಾರಣವಾಯಿತೇ?
ದುಬೈಗೆ ತೆರಳುವ ಮೊದಲು ಸಿಎಸ್ ಕೆ ತಂಡ ಚೆನ್ನೈನಲ್ಲಿ ಒಂದು ವಾರಗಳ ಕಾಲ ತರಬೇತಿ ಕ್ಯಾಂಪ್ ಆಯೋಜಿಸಿತ್ತು. ಆದರೆ ದುಬೈಗೆ ತೆರಳುವ ಮೊದಲು ಭಾರತದಲ್ಲಿ ಕ್ಯಾಂಪ್ ಸೇರುವುದು ಬೇಡ ಎಂದು ಬಿಸಿಸಿಐ ಸೂಚನೆಯಿದ್ದರೂ ಚೆನ್ನೈ ತಂಡ ಅದನ್ನು ಧಿಕ್ಕರಿಸಿತ್ತು.
ಅಲ್ಲಿ ಕ್ಯಾಂಪ್ ಸೇರಿದ್ದಾಗಲೇ ಇಷ್ಟೊಂದು ತರಬೇತಿ ಸಿಬ್ಬಂದಿಗಳಿಗೆ, ಕ್ರಿಕೆಟಿಗರಿಗೆ ಕೊರೋನಾ ಸೋಂಕು ತಗುಲಿತು ಎನ್ನಲಾಗಿದೆ. ಹೀಗಾಗಿ ಬಿಸಿಸಿಐ ಮಾತು ತಳ್ಳಿ ಹಾಕಿ ಚೆನ್ನೈ ತಂಡ ತಪ್ಪು ಮಾಡಿತೇ ಎಂಬ ಮಾತುಗಳು ಈಗ ಕೇಳಿಬರುತ್ತಿವೆ.