Publish Date: Wed, 13 Apr 2022 (09:31 IST)
Updated Date: Wed, 13 Apr 2022 (09:32 IST)
ಮುಂಬೈ: ಐಪಿಎಲ್ 2022 ರಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್ ಇಂದು ಕಿಂಗ್ಸ್ ಪಂಜಾಬ್ ವಿರುದ್ಧ ಪಂದ್ಯವಾಡಲಿದೆ.
ಮುಂಬೈಗೆ ಹೋಲಿಸಿದರೆ ಪಂಜಾಬ್ ವಾಸಿ. ಆಡಿದ ನಾಲ್ಕು ಪಂದ್ಯಗಳ ಪೈಕಿ ಮಯಾಂಕ್ ಅಗರ್ವಾಲ್ ನೇತೃತ್ವದ ತಂಡ ಎರಡು ಗೆಲುವು ಸಾಧಿಸಿದೆ. ಆದರೆ ನಾಯಕ ಮಯಾಂಕ್ ಫಾರ್ಮ್ ನಲ್ಲಿಲ್ಲದೇ ಇರುವುದು ತಂಡಕ್ಕೆ ಚಿಂತೆಯಾಗಿದೆ.
ಇತ್ತ ಮುಂಬೈಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಆಡಿದ ಎಲ್ಲಾ ಪಂದ್ಯಗಳನ್ನೂ ಸೋತು ರೋಹಿತ್ ಶರ್ಮಾ ತೀವ್ರ ಹತಾಶೆಯಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವುದು ಚಾಂಪಿಯನ್ ತಂಡಕ್ಕೆ ಪ್ರತಿಷ್ಠೆಯ ವಿಷಯವಾಗಲಿದೆ. ಇಂದಿನ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.